『[Kannada] ಆಡಿಯೋ ಪುಸ್ತಕ - ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.』のカバーアート

[Kannada] ಆಡಿಯೋ ಪುಸ್ತಕ - ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.

[Kannada] ಆಡಿಯೋ ಪುಸ್ತಕ - ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.

無料で聴く

ポッドキャストの詳細を見る

【Amazonプライム会員限定】今ならプレミアムプランが4か月 月額99円。

10月19日まで。※適用条件あり
[Preview books] [Borrow books] [Pause] ನೀವು ಕೇಳುತ್ತಿರುವುದು, divine voice publications, ರವರಿಂದ ಪ್ರಕಾಶಿತ, "ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ", ಎಂಬ ಧ್ವನಿಪುಸ್ತಕ. ಇದು, "ಸಮಗ್ರ ಯೋಗವಿಜ್ಞಾನ", ಎಂಬ ಸರಣಿಯ ಮೊದಲನೆಯ ಭಾಗ. ಮೂಲ ಆಂಗ್ಲ ಪುಸ್ತಕ, "The ultimate book on Yoga : All that you want to know about Yoga". ಲೇಖಕರು - ಡಾಕ್ಟರ್ ಕಿಂಗ್ ಮತ್ತು ಸ್ವಾಮೀ ಸತ್ಯಪ್ರಿಯ.ಯೋಗ: ಕೇವಲ ದೈಹಿಕ ವ್ಯಾಯಾಮವೇ ಅಥವಾ ಅದಕ್ಕೂ ಮೀರಿದ ವಿಜ್ಞಾನವೇ? ಇಂದಿನ ವೇಗದ ಬದುಕಿನಲ್ಲಿ ನೆಮ್ಮದಿ ಎಂಬುದು ಮರೀಚಿಕೆಯಾಗುತ್ತಿದೆ. ಆದರೆ ಉತ್ತರ ನಮ್ಮಲ್ಲೇ ಇದೆ. ಈ ಪುಸ್ತಕಸರಣಿಯು ಪ್ರಾಚೀನ ಯೋಗ ಪರಂಪರೆ ಮತ್ತು ಆಧುನಿಕ ಮೆದುಳಿನ ವಿಜ್ಞಾನದ ನಡುವಿನ ಅದ್ಭುತ ಕೊಂಡಿಯನ್ನು ಪರಿಚಯಿಸುತ್ತದೆ.ಯೋಗಾಸನಗಳು ಕೇವಲ ದೇಹವನ್ನಷ್ಟೇ ಅಲ್ಲ, ನಮ್ಮ ಮೆದುಳಿನ ಕಾರ್ಯವೈಖರಿಯನ್ನು ಹೇಗೆ ಬದಲಿಸಬಲ್ಲವು? ಧ್ಯಾನದ ಮೂಲಕ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ, ಆನಂದದ ಅನ್ವೇಷಣೆ ಮಾಡುವುದು ಹೇಗೆ? ೩೦೦೦ ವರ್ಷಗಳ ಇತಿಹಾಸವಿರುವ ಯೋಗಪಥವನ್ನು ಇಂದಿನ ವಿಜ್ಞಾನದ ಒರೆಗಲ್ಲಿಗೆ ಹಚ್ಚಿ, ಸರಳವಾಗಿ ವಿವರಿಸುವ ಪ್ರಯತ್ನವೇ ಈ 'ಸಮಗ್ರ ಯೋಗವಿಜ್ಞಾನ' ಎಂಬ ಪುಸ್ತಕ ಸರಣಿ.ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮತ್ತು ಮನಸ್ಸಿನ ರಹಸ್ಯಗಳನ್ನು ಭೇದಿಸಲು ಇದೊಂದು ಸಮಗ್ರ ಕೈಪಿಡಿ.ಈ ಪುಸ್ತಕಸರಣಿಯ ಪ್ರಮುಖ ಆಕರ್ಷಣೆಗಳು:- ವೈಜ್ಞಾನಿಕ ದೃಷ್ಟಿಕೋನ: ಯೋಗ ಮತ್ತು ಮೆದುಳಿನ ಸಂಬಂಧದ ವಿಶ್ಲೇಷಣೆ.- ಪ್ರಾಯೋಗಿಕ ಹಂತಗಳು: ಧ್ಯಾನ ಮತ್ತು ಏಕಾಗ್ರತೆ ವೃದ್ಧಿಸುವ ಸುಲಭ ಮಾರ್ಗಗಳು.- ಐತಿಹಾಸಿಕ ಹಿನ್ನೆಲೆ: ಯೋಗ ಬೆಳೆದು ಬಂದ ೩೦೦೦ ವರ್ಷಗಳ ಪಯಣ.ಈ ಸರಣಿಯಲ್ಲಿ ಒಟ್ಟು ಒಂಬತ್ತು ಪುಸ್ತಕಗಳಿವೆ. ಅವೆಂದರೆ :ಭಾಗ 1. ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.: ಪ್ರಸ್ತುತ ಪುಸ್ತಕ.ಭಾಗ 2. ಯೋಗವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಮೆದುಳಿನ ವಿಜ್ಞಾನ.ಭಾಗ 3. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಹೇಗೆ?ಭಾಗ 4. ಯೋಗಾಸನಗಳು ಆರೋಗ್ಯವನ್ನು ಹೇಗೆ ಸುಧಾರಿಸುತ್ತವೆ?ಭಾಗ 5. ಏಕಾಗ್ರತೆಯನ್ನು ಚುರುಕುಗೊಳಿಸುವುದು ಹೇಗೆ?ಭಾಗ 6. ಧ್ಯಾನ ಮಾಡುವುದು ಹೇಗೆ?ಭಾಗ 7. ಧ್ಯಾನ ಮಾಡಿದಾಗ ಏನಾಗುತ್ತದೆ?ಭಾಗ 8. ನಮ್ಮ ಮೆದುಳನ್ನು ಮೀರಿದ ಮನಸ್ಸೊಂದಿದೆಯೇ?ಭಾಗ 9. ಯೋಗದ ಅಂತಿಮ ಗುರಿ ಏನು?ಬನ್ನಿ, ಯೋಗವನ್ನು ಸರಿಯಾಗಿ ತಿಳಿದುಕೊಳ್ಳೋಣ.ಇಂದಿನ ದಿನಗಳಲ್ಲಿ ಯೋಗ ಎಂದರೆ ಏನು ಎಂದು ಗೊತ್ತಿಲ್ಲದವರೇ ವಿರಳ. ಯೋಗ ಬಹಳ ಪ್ರಯೋಜನಕಾರಿ ಎಂಬುದನ್ನು ಬಹುತೇಕ ಎಲ್ಲರೂ ಸಹಜವಾಗಿಯೇ ಒಪ್ಪುತ್ತಾರೆ. ಅನೇಕ ಯೋಗ ಗುರುಗಳು ಯೋಗದ ಬಗ್ಗೆ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಬಹಳ ಜನಪ್ರಿಯವೂ ಆಗಿವೆ.ಆದರೆ ಸ್ವಲ್ಪ ನಿಕಟವಾಗಿ ನೋಡಿದರೆ, ಈ ಪುಸ್ತಕಗಳಲ್ಲಿ ಬಹುತೇಕವು ಆ ಗುರುಗಳು ಪ್ರಚಾರ ಮಾಡುತ್ತಿರುವ ...
adbl_web_anon_alc_button_suppression_t1
まだレビューはありません