『[Kannada] AI ವ್ಯವಸ್ಥೆಗಳಿಗೆ ನಿಜವಾಗಿಯೂ ಪ್ರಜ್ಞೆ ಇದೆಯೇ?』のカバーアート

[Kannada] AI ವ್ಯವಸ್ಥೆಗಳಿಗೆ ನಿಜವಾಗಿಯೂ ಪ್ರಜ್ಞೆ ಇದೆಯೇ?

[Kannada] AI ವ್ಯವಸ್ಥೆಗಳಿಗೆ ನಿಜವಾಗಿಯೂ ಪ್ರಜ್ಞೆ ಇದೆಯೇ?

無料で聴く

ポッドキャストの詳細を見る
[Preview books] [Borrow books] [Pause] ಬ್ಲೇಕ್ ಲೆಮೊಯಿನ್ ಎಂಬ ಗೂಗಲ್ನ ಮಾಜಿ ಉದ್ಯೋಗಿಗೆ ಇದೇ ಪ್ರಶ್ನೆಯು ಅವರ ಕೆಲಸ ಮತ್ತು ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. ಈ ಬಗ್ಗೆ ಬಹುಶಃ ನೀವು ಓದಿರಬಹುದು.2022 ರಲ್ಲಿ ಗೂಗಲ್ನ ಏಆಯ್ ಗಳಲ್ಲಿ ಒಂದಾದ 'ಲ್ಯಾಮ್ಡಾ' ಅನ್ನು ಪರೀಕ್ಷಿಸುತ್ತಿದ್ದಾಗ, ಬ್ಲೇಕ್ ಅವರಿಗೆ ಆ ಏಆಯ್ ಗೆ ಪ್ರಜ್ಞೆ ಇದೆ ಎಂದು ಅನಿಸಿತು!. ಅವರು ಅಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಆ ಏಆಯ್ ಯ ಹಕ್ಕುಗಳಿಗಾಗಿ ಹೋರಾಡಲು ಪ್ರಾರಂಭಿಸಿದರು. ಅದು ಅವರು ತನ್ನ ಕೆಲಸವನ್ನೇ ಕಳೆದುಕೊಳ್ಳುವಂತೆ ಮಾಡಿತು.AI ವ್ಯವಸ್ಥೆಗಳ ಪ್ರಜ್ಞೆಯ ಬಗ್ಗೆ ಮಾತನಾಡುವ ಮೊದಲು, ನಮ್ಮ ಸ್ವಂತ ಪ್ರಜ್ಞಾಪೂರ್ವಕ ಅನುಭವವನ್ನು ಅರ್ಥಮಾಡಿಕೊಳ್ಳೋಣ. ನಾವು ಪ್ರಜ್ಞಾಪೂರ್ವಕ ಅನುಭವವನ್ನು ಹೇಗೆ ಪಡೆಯುತ್ತೇವೆ ಎಂಬುದು ನರವಿಜ್ಞಾನಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಒಂದು ಒಗಟಾಗಿತ್ತು. ಫಂಕ್ಷನಲ್ ಎಂ-ಆರ್-ಐ ಸ್ಕ್ಯಾನರ್ಗಳಂತಹ ಆಧುನಿಕ ಸಾಧನಗಳ ಆವಿಷ್ಕಾರವಾದಾಗ, ನರವಿಜ್ಞಾನಿಗಳು ಮಾನವಮಿದುಳಿನ ವಿವಿಧ ಗ್ರಹಣ ಪ್ರಕ್ರಿಯೆಗಳನ್ನು ವಿವರಿಸಲು ಶಕ್ತರಾದರು. ಒಂದು ನಿರ್ದಿಷ್ಟ ಗ್ರಹಿಕೆಗೆ ಕಾರಣವಾಗಿರುವ ಮಿದುಳಿನ ನಿಖರವಾದ ಸ್ಥಾನವನ್ನು ಅವರು ಪತ್ತೆಹಚ್ಚಬಲ್ಲವರಾದರು.ಆದರೆ, ಆರಂಭದಲ್ಲಿ, ಮಿದುಳಿನಾದ್ಯಂತ ಹರಡಿರುವ ಪ್ರದೇಶಗಳನ್ನು ಒಳಗೊಂಡಿರಬಹುದಾದ ಸಂಕೀರ್ಣ ಅನುಭವಗಳು ಹೇಗೆ ಸಾಕಾರಗೊಳ್ಳುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ.ಉದಾಹರಣೆಗೆ, ನೀವು ಒಂದು ಮರವನ್ನು ನೋಡಿದಿರೆಂದುಕೊಳ್ಳಿ. ನೀವು ತಕ್ಷಣ ಆ ಮರವನ್ನು ಒಂದು ನಿರ್ದಿಷ್ಟ ಜಾತಿಯ ಮರ ಎಂದು ಗುರುತಿಸುತ್ತೀರಿ. ನರವಿಜ್ಞಾನಿಗಳು ಮರದ ಎಲೆಗಳು, ಅದರ ಹಣ್ಣುಗಳು, ಅದರ ಕಾಂಡ ಇತ್ಯಾದಿಗಳನ್ನು ಗುರುತಿಸುವ ಮಿದುಳಿನ ನಿರ್ದಿಷ್ಟ ಪ್ರದೇಶಗಳನ್ನು ಬೆರಳುಮಾಡಿ ತೋರಿಸಬಲ್ಲವರಾಗಿದ್ದರು.ಆದರೆ ನಿಮ್ಮ ನೈಜ ಅನುಭವವು ಮಿದುಳಿನ ವಿವಿಧ ಪ್ರದೇಶಗಳನ್ನು ಬಳಸಿ ಸಂಸ್ಕರಿಸಲ್ಪಡುತ್ತವೆ. ಆದರೆ, 'ಆಹಾ! ಅದು ಮಾವಿನ ಮರ!' ಎಂಬ ಅನುಭವವನ್ನು ನಿಮಗೆ ತಲುಪಿಸುವ, ಮರದ ಸಂಪೂರ್ಣ ಚಿತ್ರವನ್ನು ಒಟ್ಟುಗೂಡಿಸುವ, ಯಾವುದೇ ಒಂದು ನಿರ್ದಿಷ್ಠ ಪ್ರದೇಶವು ಮಿದುಳಿನಲ್ಲಿ ಇಲ್ಲ.ನರವಿಜ್ಞಾನಿಗಳು ಈ ಸಮಸ್ಯೆಯನ್ನು 'ದಿ ಬೈಂಡಿಂಗ್ ಪ್ರಾಬ್ಲಮ್' ಎಂದು ಕರೆದರು. ಅಂದರೆ ಮಿದುಳಿನಾದ್ಯಂತ ಹರಡಿರುವ ಮಾಹಿತಿಯ ತುಣುಕುಗಳನ್ನು ಒಟ್ಟುಹಾಕಿ, ಅವುಗಳನ್ನು ಪರಸ್ಪರ ಹೊಂದಿಸುವ ಸಮಸ್ಯೆ.1900 ರ ದಶಕದ ಕೊನೆಯ ಭಾಗದಲ್ಲಿ, ಬರ್ನಾರ್ಡ್ ಬಾರ್ಸ್ ಎಂಬ ಅಮೇರಿಕನ್ ನರವಿಜ್ಞಾನಿ ಈ ವಿದ್ಯಮಾನವನ್ನು ವಿವರಿಸಲು 'ಗ್ಲೋಬಲ್ ವರ್ಕ್ಸ್ಪೇಸ್ ಥಿಯರಿ' ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಆ ಸಿದ್ಧಾಂತವು ಬಹಳ ರೂಪಕಾತ್ಮಕವಾಗಿತ್ತು.ಬಾರ್ಸ್ ಅವರ ರೂಪಕವು ಬಹಳ ಟೀಕೆಗೆ ಒಳಗಾಯಿತು. ಏಕೆಂದರೆ ...
adbl_web_anon_alc_button_suppression_t1
まだレビューはありません