『[Kannada] ಇಂದಿನ AI ವ್ಯವಸ್ಥೆಗಳಿಗೆ ನಿಜವಾಗಿಯೂ ಏನಾದರೂ ಅರ್ಥವಾಗುತ್ತದೆಯೇ?』のカバーアート

[Kannada] ಇಂದಿನ AI ವ್ಯವಸ್ಥೆಗಳಿಗೆ ನಿಜವಾಗಿಯೂ ಏನಾದರೂ ಅರ್ಥವಾಗುತ್ತದೆಯೇ?

[Kannada] ಇಂದಿನ AI ವ್ಯವಸ್ಥೆಗಳಿಗೆ ನಿಜವಾಗಿಯೂ ಏನಾದರೂ ಅರ್ಥವಾಗುತ್ತದೆಯೇ?

無料で聴く

ポッドキャストの詳細を見る
[Preview books] [Borrow books] [Pause] ChatGPT, Gemini, ಅಥವಾ ಆ ತರಹದ ಬೇರೆ ಯಾವುದಾದರೂ ಕೃತಕ ಬುದ್ಧಿಮತ್ತೆಯೊಂದಿಗೆ ಕೆಲಸ ಮಾಡಿರುವ ಯಾರಿಗೇ ಆದರೂ, ಅರ್ಥವಾಗುತ್ತದೆ ಅಂದೇ ಅನಿಸಿರುತ್ತದೆ. ಒಂದು AI, ನಮ್ಮ ಜೊತೆ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಸಂವಹನ ನಡೆಸುತ್ತದೆ. ಅವು ಹಾಸ್ಯ ಮಾಡುತ್ತವೆ, ನಮ್ಮ ವ್ಯಂಗ್ಯದ ಮಾತುಗಳಿಗೆ ಮತ್ತು ಸಣ್ಣಪುಟ್ಟ ಆಕ್ಷೇಪಗಳಿಗೂ ಸಹ ಮನುಷ್ಯರಂತೆಯೇ ಪ್ರತಿಕ್ರಿಯಿಸುತ್ತವೆ.ನಿಮ್ಮ ಉಪನ್ಯಾಸಕ್ಕೆ ಬೇಕಾದ ಪ್ರದರ್ಶನ ಫಲಕಗಳನ್ನು ಸಿದ್ಧಪಡಿಸಿಕೊಡು ಎಂದು ನೀವು ಕೇಳಿದರೆ, ನೀವೇ ಸ್ವತಃ ಮಾಡಿಕೊಳ್ಳುವುದಕ್ಕಿಂತ ಉತ್ತಮವಾಗಿ ಮಾಡಿಕೊಡುತ್ತವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜುಗಳ assignment ಗಳನ್ನು ಕೂಡಾ AI ಮೂಲಕವೇ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ.ಹಾಗಾದರೆ, ಅವುಗಳಿಗೆ ವಿಷಯಗಳು ಅರ್ಥವಾಗುತ್ತವೆ ಎಂಬುದು ಸ್ಪಷ್ಟವಲ್ಲವೇ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಇವತ್ತಿನ ದಿನದಲ್ಲಿ AIಗಳನ್ನು ರೂಪಿಸಿರುವ ವಿಧಾನವೇ ಹಾಗಿದೆ. ವಾಸ್ತವವಾಗಿ ಅವುಗಳಿಗೆ ಏನನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿಯೇ ಇರುವುದಿಲ್ಲ.ಒಂದು AI ಮಾಡುವುದಿಷ್ಟೇ - ನೀವು ಹೇಳಿರುವುದರ ಮೇಲೆ, ಅಥವಾ ಅದಕ್ಕೆ ಮೊದಲೇ ಕಲಿಸಿರುವುದರ ಮೇಲೆ, ಕೇವಲ pattern match ಮಾಡಿ, ನಿಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಏನಿರಬಹುದು ಎಂದು ಊಹೆ ಮಾಡುತ್ತದೆ, ಅಷ್ಟೇ.ಅದೇನೂ ಅಷ್ಟೊಂದು ಕೆಟ್ಟದ್ದಲ್ಲ ಬಿಡಿ. ನಮ್ಮಲ್ಲಿ ಎಷ್ಟೋ ಜನರು ಮಾಡುವುದು ಇದನ್ನೇ. ಹೆಚ್ಚಿನವರು pattern match ಮಾಡಿ ಊಹೆ ಮಾಡುವ ಯಂತ್ರಗಳಂತೆಯೇ ಇರುತ್ತಾರೆ. ನಾವು ಯಾವುದನ್ನಾದರೂ ಆಳವಾಗಿ ಅರ್ಥ ಮಾಡಿಕೊಳ್ಳಲು ಅಷ್ಟಾಗಿ ಶ್ರಮ ಪಡುವುದೇ ಇಲ್ಲ.ಅಂದಹಾಗೆ, ನಿಜವಾದ ಅರ್ಥೈಸಿಕೊಳ್ಳುವಿಕೆಯಲ್ಲಿ ಏನೆಲ್ಲಾ ಅಡಗಿರುತ್ತದೆ?ಅತ್ಯಂತ ಸರಳೀಕರಿಸಿ ಹೇಳುವುದಾದರೆ, ನಮಗೆ ಮುಂಚೆಯೇ ತಿಳಿದಿರುವ ಒಂದು ಪದವನ್ನು ಹೊಸದಾಗಿ ಎದುರಾದ ಒಂದು ಪದಕ್ಕೆ ಜೋಡಿಸಿಕೊಳ್ಳುವುದು. ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮಗೆ ಈಗಾಗಲೇ ತಿಳಿದಿರುವುದರ ಮೂಲಕ ಒಂದು ಹೊಸ ಪದದ 'ಅರ್ಥ' ಏನೆಂದು ಕಂಡುಕೊಳ್ಳುವುದು.ಆದರೆ ಈ ಜೋಡಣೆ, ಕೇವಲ ಪದಗಳ ಮಟ್ಟಕ್ಕೇ ಸೀಮಿತವಾಗಿರಬೇಕಿಲ್ಲ. ಅದು ಅದಕ್ಕಿಂತಲೂ ಮಿಗಿಲಾಗಿರಬಹುದು.ಉದಾಹರಣೆಗೆ, ಯಾರಾದರೂ 'ಬೆಕ್ಕು' ಎಂದ ತಕ್ಷಣ, ನಮ್ಮ ಮನಸ್ಸು ಆ ಪದವನ್ನು ಮೃದುವಾದ ತುಪ್ಪಳದ ಉಂಡೆಯಂತಿರುವ, ನಾಲ್ಕು ಕಾಲು, ಒಂದು ಉದ್ದನೆಯ ಬಾಲ ಇರುವ, ಕೆಲವೊಮ್ಮೆ ಗುರುಗುಟ್ಟುವ ಒಂದು ಪ್ರಾಣಿಗೆ ಸಂಬಂಧಿಸುತ್ತದೆ. ವಾಸ್ತವವಾಗಿ ನಾವು, ಒಂದು ಪದವನ್ನು, ಆ ಪದವನ್ನು ಪ್ರತಿನಿಧಿಸುವ ಒಂದು ಜೀವಿಯ ಸಂಪೂರ್ಣ ವಿವರಣೆಗೆ ಹೊಂದಿಸಿರುತ್ತೇವೆ.ನಮ್ಮ ಅರ್ಥೈಸುವಿಕೆಯು ನಮ್ಮ ದೃಷ್ಯಾನುಭವಕ್ಕಷ್ಟೇ ಸೀಮಿತವಲ್ಲ.ನೀವು ಹಿಂದೊಮ್ಮೆ ಕೆಲವು ಆಗ್ನೇಯ ಏಷ್ಯಾ ದೇಶಗಳಿಗೆ ...
adbl_web_anon_alc_button_suppression_t1
まだレビューはありません